ಇತ್ತೀಚೆಗೆ ಉಡುಪಿಯಲ್ಲಿ ಸಂಭವಿಸಿದ ಘಟನೆ ಮತ್ತೊಮ್ಮೆ ಎಲ್ಲರಿಗೂ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಹೆಚ್ಚು ಲಾಭ ಸಿಗುತ್ತದೆ ಎಂಬ ಆಮಿಷದಲ್ಲಿ ವ್ಯಕ್ತಿಯೊಬ್ಬರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ.
ಉಡುಪಿಯ ಶಿವಶಂಕರ ಎಂಬವರ ವಾಟ್ಸ್‌ಆ್ಯಪ್‌ಗೆ 2025ರ ಮಾರ್ಚ್ 1 ರಂದು ಅಪರಿಚಿತ ವ್ಯಕ್ತಿಯೊಬ್ಬರು ಸಂಪರ್ಕಿಸಿದ್ದರು. "ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದು" ಎಂದು ಭರವಸೆ ನೀಡಿದ ಆತನು, ಅವರು ನಂಬುವಂತೆ ಮಾಡಿದ್ದಾನೆ. ಶಿವಶಂಕರ ಅವರು ಮೇ 19ರಿಂದ ಮೇ 26ರ ನಡುವೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಸುಮಾರು 7 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ. ಬಳಿಕ ಅವರ ಗಮನಕ್ಕೆ ಇದು ವಂಚನೆ ಎಂಬುದು ಬಂದಿದೆ.